The Mysore Association The Mysore Association Mumbai · A cultural home for Kannadigas since 1926
News

ಅಬ್ಬಬ್ಬ ಅಂತು ನಮ್ಮ ಅಸೋಸಿಯೇಶನ್ ವೆಬ್ ಸೈಟ್ ಬಂದೇ ಬಿಡ್ತು !

April 25, 2012

ಸನ್, ೨೦೧೨ ರ   'ಅಕ್ಷಯ ತೃತಿಯ' ದಿನ, ಸ್ವಲ್ಪ ವಿಶೇಷೆವಾಗಿತ್ತೆಂದು ಹೇಳಲು ಅಡ್ಡಿಯಿಲ್ಲ.  ಆ ದಿನ, ಮೈಸೂರ್ ಅಸೋಸಿಯೇಶನ್ ನಲ್ಲಿ ಗಣಪತಿ ಪೂಜೆಯ ಏರ್ಪಾಡಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರು ಹಾಗು ಅವರ ಪರಿವಾರ ಭಾಗವಹಿಸಿ,  ಗಣೇಶನ ಅನುಗ್ರಹಕ್ಕೆ ಪಾತ್ರರಾದರು. ಗಣಪತಿ ಪೂಜೆಯ ಬಳಿಕ ಸದಸ್ಯರನ್ನೆಲ್ಲಾ ಮೊದಲನೆಯ ಮಹಡಿಯ ಮಿನಿ ಸಭಾಗೃಹದಲ್ಲಿ ಸೇರಲು,  ಆದೇಶಿಸಲಾಯಿತು. ಅಲ್ಲಿ ಮೊದಲು ಶ್ರೀ.ಕೆ.ಮಂಜುನಾಥಯ್ಯನವರು, ಎಲ್ಲರನ್ನೂ ಸ್ವಾಗತಿಸಿ, ಮೈಸೂರ್ ಅಸೋಸಿಯೇಷನ್ ನ ಇಂಟರ್ನೆಟ್ ತಾಣ ಸಿದ್ಧವಾಗಿರುವ ಬಗ್ಗೆ ಘೋಷಿಸಿದರು.

ನಂತರ, ಶ್ರೀ.ನಾರಾಯಣ ನವಿಲೇಕರ್ ಅಧಿಕೃತವಾಗಿ ತಾಣದ ಎಲ್ಲಾ ವಿವರಗಳನ್ನು ತಿಳಿಸಿದರು. ಕೊನೆಗೆ ಅಧಿಕೃತವಾಗಿ ಅಸೋಸಿಯೆಷನ್ ನ ಉಪಾಧ್ಯಕ್ಷರಾದ ಜಾಗೀರ್ದಾರ್ ರವರು, ತಾಣದ ಉದ್ಘಾಟನೆಯನ್ನು ನೆರೆವೇರಿಸಿದರು.
 
ಅದರ ತಥ್ಯಗಳು ಹೀಗಿವೆ :
 
೧. ಅತ್ಯಂತ ಆಕರ್ಶಕವಾಗಿ ಸಿದ್ಧಪಡಿಸಿರುವ ನಮ್ಮ 'ಮೈಸೂರ್ ಅಸೊಸಿಯೇಷನ್ ನ ತಾಣ',  ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಅದರಲ್ಲಿ ಸನ್, ೧೯೨೬ ರಿಂದ ಅಸೋಸಿಯೇಷನ್ ನಡೆದುಬಂದ ಹಾದಿಯ ಜಾಡನ್ನು ಗುರುತಿಸಬಹುದು. ಇವು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಉಪಲಬ್ಧವಿವೆ.
 
೨. ಅಸೋಸಿಯೇಷನ್ ನಲ್ಲಿ ಜರುಗುವ ಅಥವಾ ಈಗಾಗಲೇ ನಡೆದ ಕಾರ್ಯಕ್ರಮಗಳನ್ನು ಸುಲಭವಾಗಿ ಮನೆಯಲ್ಲಿ ಕುಳಿತೇ ಓದಬಹುದು.
 
೩. ಅಸೋಸಿಯೇಷನ್ ನ ಪುಸ್ತಕ ಭಂಡಾರ, ಮೊದಲಾದ ವಿಶಯಗಳ ಬಗ್ಗೆ ವಿವರಗಳು, ಉತ್ತಮವಾದೆಂತೆಲ್ಲಾ ಸಿಗುತ್ತವೆ.
 
ವಿದೇಶದಲ್ಲಿರುವ ಗೆಳೆಯರು, ಸಂಬಂಧೀಕರು, ಮತ್ತು ಹೆಚ್ಚು ಓಡಾಡಲು ಅಸಹಾಯಕರಾದ ಮುಂಬೈನ ಸದಸ್ಯರಿಗೂ ಮನೆಯಲ್ಲೇ ಒದಗುವ ಸಮಾಚಾರ ನಿಜಕ್ಕೂ ವಂದನಾರ್ಹ. .   

ಬದಲಾಗುಗುತ್ತಿರುವ ಸಮಾಜದ ಆದ್ಯತೆಗಳಿಗನುನುಸಾರವಾಗಿ ಇದೊಂದು ಕೆಲಸ ನಡೆಯಬೇಕಿತ್ತು. ಯಾವುದಕ್ಕೂ ಸಮಯಬರದೆ ಹೇಗೆ ಸಾಧ್ಯ ? ಇದು ಹಳೆಯ ವಿಷಯವಲ್ಲ; ಹಾಗೆಯೇ ಹೊಸದೆಂದು ಹೇಳುವ ಹೊತ್ತಿಗೆ ಮತ್ತೊಂದು ತಂತ್ರಜ್ಞಾನ ನಮ್ಮ ತಲೆಯಮೇಲೆ ಬಂದುಕುಳಿತಿರುತ್ತದೆ. ಇವೆಲ್ಲಾ ನಿಧಾನವಾಗಿ ಕಾರ್ಯಗತವಾಗುತ್ತವೆ. 

-ನಮಸ್ಕಾರ. ಭಾಳ ಸಂತೋಷ ಆಗಿದೆಯಪ್ಪ... 

-ಹೊಳಲ್ಕೆರೆ ರಂಗರಾವ್ ಲಕ್ಷ್ಮಿವೆಂಕಟೇಶ್
 
(ಹೊರಂಲವೆಂ )
 
ದೂರವಾಣಿ ಸಂ :
 
ಮೊ : ೯೮೬೭೬೦೬೮೧೯ 
 
ಫೋ : ೦೨೨-೨೫೧೦೬೦೬೮