The Mysore Association The Mysore Association Mumbai · A cultural home for Kannadigas since 1926
News

ಅಂಧೇರಿಚ ರಾಜ, ಎಂದು ಬೀಗುವ ಗಣಪತಿ ಬಪ್ಪ !

September 28, 2012

 ನಾವು ೨೭ ರಂದು ಮುಂಬೈನ ಉಪನಗರಗಳಗಳಲ್ಲೊಂದಾದ,  'ಅಂಧೇರಿಯ ವೀರಾದೇಸಾಯಿ ರಸ್ತೆ'ಗೆ ಹೋಗಿದ್ದೆವು. ಅಲ್ಲಿ ನಮಗೆ ಈ 'ಅಂಧೇರಿ ಚ ರಾಜನ ದರ್ಶನ ಭಾಗ್ಯ ಲಭಿಸಿತು' !

ಸುಂದರವಾದ ಮೂರ್ತಿ......

 

ಪ್ರತಿವರ್ಷದಂತೆ ಈ ವರ್ಷವೂ 'ಅಂಧೇರಿ ಗಣೇಶನ ಪೂಜೆಯ  ವಿಧಿವಿಧಾನಗಳು ವಿಶಿಷ್ಠವಾಗಿವೆ'. ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅನಾಯಾಸವಾಗಿ ಆ ಪುಣ್ಯ ಲಭಿಸಿತು. ಗಣೇಶನನ್ನು ಕೂಡಿಸಿರುವ ದೇವಾಲಯದ ಸೊಬಗನ್ನು ಕಣ್ಣಲ್ಲಿ ನೋಡಿಯೇ ಆನಂದಿಸಬೇಕು ! ಬಿಳಿಯ ಶುಭ್ರ ಹಾಲುಗಲ್ಲಿನ ಕಂಭಗಳು, ಅತ್ಯುತ್ತಮ ಕುಸುರಿಕೆಲಸಮಾಡಿದ ಮೇಲ್ಚಾವಣಿ  ಎಲ್ಲೆಲ್ಲೂ ಕಲಾ ಪ್ರಕಾರಗಳು, ಇವೆಲ್ಲಾ  'ಪ್ಲಾಸ್ಟರ್ ಆಪ್ಹ್ ಪ್ಯಾರಿಸ್' ನಲ್ಲಿ ಎನ್ನುವುದು ಅತಿ ಮುಖ್ಯ. ಗಣೇಶ ಮೂರ್ತಿ ಸುಂದರವಾಗಿದೆ.  ಮುಂದಿನ ವರ್ಷ ಮರೆಯದೆ ಹೋಗಿ ಬನ್ನಿ. ಮರೆಯಬೇಡಿ.