ಅಕ್ಟೋಬರ್ 8, 2016 ರ ಶನಿವಾರ ಸಂಜೆ ಮೈಸೂರು ಅಸೋಸಿಯೇಷನ್ನಲ್ಲಿ "ಶಾರದಾ ಪೂಜೆ ಕಾರ್ಯಕ್ರಮ" ಜರುಗಲಿರುವುದು.
ಕಾರ್ಯಕ್ರಮದ ವಿವರ :
ಸಂಜೆ 4.00 ರಿಂದ 5.30 ರವರೆಗೆ 'ಹೂ ರಂಗೋಲಿ ಸ್ಪರ್ಧೆ' (ಸ್ಪರ್ಧಿಗಳು ಹೂವು ಮತ್ತು ಇತರ ಸಾಮಾಗ್ರಿಗಳನ್ನು ತಾವೇ ತರಬೇಕು).
2X2 ಅಡಿ ಜಾಗದಲ್ಲಿ ಹೂವಿನ ಅಲಂಕಾರದಲ್ಲಿ ರಂಗೋಲಿ ಹಾಕಬೇಕು.
ಸಂಜೆ 5.30 ರಿಂದ "ಶಾರದಾ ಪೂಜೆ ಮತ್ತು ಆರತಿ ಹಾಡು".
ಸಂಜೆ 6.30 ರಿಂದ "ಕೋಲಾಟ" (ದಾಂಡಿಯ ರಾಸ್).
ಕಾರ್ಯಕ್ರಮದ ನಂತರ ಪ್ರೀತಿ ಭೋಜನವಿದೆ.
ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಪಾಲ್ಗೊಳ್ಳುವಿಕೆಯನ್ನು ದಿನಾಂಕ 5 ಅಕ್ಟೋಬರ್, 2016ರ ಒಳಗೆ ತಿಳಿಸಬೇಕಾಗಿ ಕೋರಿಕೆ.
ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿ "ಶ್ರೀ ಶಾರದಾ ಮಾತೆಯ" ಆಶೀರ್ವಾದ ಸ್ವೀಕರಿಸಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 022 - 2402 4647 / 2403 7065.
ಇಂತು,
ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮೈಸೂರು ಅಸೋಸಿಯೇಷನ್, ಮುಂಬೈ