The Mysore Association The Mysore Association Mumbai · A cultural home for Kannadigas since 1926
Event

'ಟಿ.ಪಿ.ಕೈಲಾಸಂ', 'ನಾಟಕೋತ್ಸವ ಸಮಾರಂಭ'

September 25, 2010
'ಟಿ.ಪಿ.ಕೈಲಾಸಂ', 'ನಾಟಕೋತ್ಸವ ಸಮಾರಂಭ'

ಟಿ.ಪಿ.ಕೈಲಾಸಂ ನಾಟಕೋತ್ಸವವನ್ನು ಮೈಸೂರ್ ಅಸೋಸಿಯೇಷನ್ ಹಮ್ಮಿಕೊಂಡಿತ್ತು. ಆ ದಿನ, ಖ್ಯಾತ ಸಾಹಿತಿ, ಶ್ರೀ. ವೈ. ವಿ. ಗುಂಡೂರಾವ್ ರವರಿಂದ 'ಸುತ್ತಮುತ್ತ' ನಾಟಕ ಪ್ರದರ್ಶಿಸಲ್ಪಟ್ಟಿತು. ೨೬ ರಂದು ಸಂಜೆ,'ಟಿ.ಪಿ.ಕೈಲಾಸಂ- ನಾಟಕಗಳ ಸರಮಾಲೆ', 'ಟಿ.ಪಿ.ಕೈಲಾಸಂ ಹಾಡುಗಳು', 'ಅಂತರಂಗ ನಾಟಕ ತಂಡ' ಬೆಂಗಳೂರಿನವರಿಂದ, ನಿರ್ದೇಶನ, ಶ್ರೀ.ಎಚ್.ವಿ.ನಟರಾಜ್ ರವರಿಂದ. ೨೭ ರಂದು, 'ವಿಚಾರ ಸಂಕಿರಣ-ಟಿ. ಪಿ. ಕೈಲಾಸಂರವರ ಬದುಕು, ಬರಹ, ಬವಣೆ'-ಖ್ಯಾತ ವಿಮರ್ಶಕ, ಶ್ರೀ. ಬಿ.ಎಸ್. ಕೇಶವರಾವ್ ರವರಿಂದ ನಡೆಯಿತು. ಡಾ. ಬಿ.ವಿ.ರಾಜರಾಂ ಅಧ್ಯಕ್ಷತೆಯಲ್ಲಿ, (ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು), ಡಾ.ಬಿ.ಆರ್.ಮಂಜುನಾಥ್, ಮುಂಬೈನ ಖ್ಯಾತನಾಟಕಕಾರರು,(ಡಾ.ಬಿ.ಆರ್.ಮಂಜುನಾಥ್ ರವರ ಅನುಪಸ್ತಿತಿಯಲ್ಲಿ), ಶ್ರೀ.ಮಂಜುನಾಥಯ್ಯನವರು ಭಾಷಣವನ್ನು ಮಂಡಿಸಿದರು. ಅದೇದಿನ, ರಾತ್ರಿ, ೭ ಗಂಟೆಗೆ,ಡಾ. ಬಿ.ವಿ.ರಾಜರಾಂ, ನಿರ್ದೇಶನದಲ್ಲಿ, 'ಹುತ್ತದಲ್ಲಿ ಹುತ್ತ', ನಾಟಕವಿತ್ತು. ಮುಂಬೈನಗರದ ನಾಟಕಾಸಕ್ತರು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿ, ಟಿ.ಪಿ.ಕೈಲಾಸಂ ರವರ ನಾಟಕವನ್ನು ವೀಕ್ಷಿಸಿ ಆನಂದಿಸಿದರು.
 

Photos

'ಟಿ.ಪಿ.ಕೈಲಾಸಂ', 'ನಾಟಕೋತ್ಸವ ಸಮಾರಂಭ'