ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ
ಈ ವರ್ಷ ಮೈಸೂರು ಅಸೋಸಿಯೇಷನ್ ಗೆ ೯೦ ವರ್ಷ ತುಂಬುತ್ತಿರುವುದರಿಂದ ಈ ಸಂಭ್ರಮದ ಆಚರಣೆಯ ಪ್ರಯುಕ್ತವಾಗಿ ಕನ್ನಡ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಇಡೀ ವಿಶ್ವದಾದ್ಯಂತ ಇರುವ ಎಲ್ಲ ಸಾಹಿತ್ಯಾಸಕ್ತರು ಇದರಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕವಿತೆಗಳನ್ನು ರಚಿಸಬಹುದಾಗಿದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
ಪ್ರಥಮ ಬಹುಮಾನ : ರೂ. ೧೦೦೦೦/-
ದ್ವಿತೀಯ ಬಹುಮಾನ: ರೂ. ೫೦೦೦/-
ತೃತೀಯ ಬಹುಮಾನ: ರೂ. ೩೦೦೦/-
ಪ್ರೋತ್ಸಾಹಕ ಬಹುಮಾನ: ರೂ. ೧೦೦೦/- (ಇಬ್ಬರಿಗೆ)
ಸ್ಪರ್ಧೆಯ ನಿಯಮಾವಳಿಗಳು :
೧) ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು.
೨) ಕವನಗಳು ಸುಮಾರು ೩೦ ಸಾಲಿನ ಮಿತಿಯಲ್ಲಿರಲಿ. ಕಾಗದಾ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ಇಮೈಲ್ ಮೂಲಕವೂ ಕಳುಹಿಸಬಹುದು.
೩) ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಮ್ ಪ್ರತ್ಯೇಕ ಕಾಗದದಲ್ಲಿ ಬರದು ಕಳುಹಿಸಿ.
೪) ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸಬೇಕು.
೫) ಸ್ಪರ್ಧೆಗೆ ಬಂದ ಕವನಗಳನ್ನು ಮರುಕಳಿಸಲಾಗುವುದಿಲ್ಲ.
೬) ತೀರ್ಪುಗಾರರ ತೀರ್ಮಾನವೇ ಅಂತಿಮ.
೭) ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ ೧೫.೦೨. ೨೦೧೬
೮) ತಿರ್ಪುಗಾರರ ತೀರ್ಮಾನವನ್ನು ಏಪ್ರಿಲ್ ೧೫ ಕ್ಕೆ ಜಾಹೀರುಗೊಳಿಸಲಾಗುವುದು.
ಆಯ್ಕೆಯಾದ ಕವನಗಳನ್ನು ಮೈಸೂರು ಅಸೋಸಿಯೇಷನ್ ನ ಮಾಸಿಕ ನೇಸರು ಪತ್ರಿಕೆಯಲ್ಲಿ ಪ್ರಕಟಸಲಾಗುವುದು.
Postal Address:
The Mysore Association, Mumbai
393, Bhau Daji Road, Matunga, Mumbai - 400 019
Tel: 022-24024647 / 24037065
Email: kavana.nesaru@gmail.com