The Mysore Association The Mysore Association Mumbai · A cultural home for Kannadigas since 1926
News

ಶಿಶುಕವನ ರಚನಾ ಸ್ಪರ್ಧೆ

May 14, 2025
ಮೈಸೂರು ಅಸೋಸಿಯೇಷನ್, ಮುಂಬೈ ಒಂದು ಪ್ರತಿಷ್ಠಿತ ಕನ್ನಡ ಸಂಸ್ಥೆಯಾಗಿದ್ದು, ತನ್ನ ಶತಕವನ್ನು ಪೂರೈಸುವತ್ತ ಮುಂದುವರಿಯುತ್ತಿದೆ. ಈ ಮೊದಲೂ ಕೂಡಾ ಕನ್ನಡ ಕವನ, ಕಥೆ ಹಾಗೂ ಏಕಾಂಕ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ “ಶತಮಾನೋತ್ಸವ ವಿಶೇಷ" ಜಾಗತಿಕ ಶಿಶುಕವನ ರಚನಾ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ.