ದಾಸರು ನಮ್ಮ ಈಶರು - ಕನಕ ಪುರಂದರ ಆರಾಧನೆ
ಮೈಸೂರು ಅಸೋಸಿಯೇಶನ್ ಹಾಗು ಬೆಂಗಳೂರಿನ ಸಂಗೀತ ಸಂಭ್ರಮ ಕೂಡಿ, ಡಿಸೆಂಬರ್ 02, 2012 ರಂದು ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ "ದಾಸರು ನಮ್ಮ ಈಶರು " ಎಂಬ ದಾಸ ನಮನದ ಆರಾಧನೆಯನ್ನು ಒಗ್ಗೂಡಿಸಿದ್ದರು. ಹರಿದಾಸರು, ಅದರಲ್ಲೂ ಪ್ರುಂದರದಾಸರು ಸಾಮಾಜಿಕ ಕಳಕಳಿ ಮತ್ತು ಸಂದೇಶಗಳನ್ನು ಸಂಗೀತದ ಮಾಧ್ಯಮದಿಂದ ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿ ಸಾರಿ ಜನರ ನೀತಿಯನ್ನು ಬಲಪಡಿಸುವ ಸಾಮಾಜಿಕ ಚಳುವಳಿಯನ್ನು, ಶತಮಾನಗಳ ಹಿಂದೆಯೇ ಮೊದಲು ಮಾಡಿದ್ದರು. 'ಅಕ್ಷರ ಕಲಿಸಿದಾತ ಗುರು' ಎಂಬ ನಾಣ್ಣುಡಿಯನ್ನು ಅನುಸರಿಸಿ ದಾಸರನ್ನು ನೆನೆದು ಅವರ ಅರಾರಾಧನೆಯನ್ನು ಮುಮ್ದುವರಿಸುವುದೇ ಈ ಕಾರ್ಯಕ್ರಮದ ಗುರಿಯಾಗಿತ್ತು.
ಡಿಸೆಂಬರ್ 1, 2012, ಶನಿವಾರ ಸಂಜೆ 7.00 ಕ್ಕೆ ಮೈಸೂರು ಅಸೋಸಿಯೇಶನ್ನಿನ ಅಧ್ಯಕ್ಷರಾದ ಶ್ರೀ. ವಿ. ರಾಮಭದ್ರ ಮತ್ತು ಖ್ಯಾತ ಗಮಕ ವಿದ್ವಾನ್ ಶ್ರೀ. ಎಂ.ಎ.ಜಯರಾಮರಾಯರು ದೀಪವನ್ನು ಬೆಳಗಿಸಿ ಕನಕೋತ್ಸವದ ಅಂಗವಾಗಿ ಏರ್ಪಡಿಸಿದ್ದ "ದಾಸರು ನಮ್ಮ ಈಶರು" ಹರಿದಾಸ ನಮನದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು ಆನಂತರ ಕಾರ್ಯಕ್ರಮದ ಮೊದಲ ದಿನ ಕನಕದಾಸ ನಮನದ ಅಂಗವಾಗಿ ವಿದ್ವಾನ್ ಎಮ್. ಎ. ಜಯರಾಮರಾಯರು ಕನಕದಾಸರ ಕಾವ್ಯ ರಾಮಧ್ಯಾನ ಚರಿತ್ರೆಯ ಆಯ್ದ ಭಾಗಗಳನ್ನು ಸುಶ್ರಾವ್ಯವಾಗಿ ವಾಚಿಸಿ ವ್ಯಾಖ್ಯಾನಿಸಿದರು. ಸಮಾಜದಲ್ಲಿ ಕಂಡುಬರುವ ಮೇಲು ಕೀಳು ಎಂಬ ಭಾವನೆ ಸಮಾಜವನ್ನು ಇಬ್ಬಗೆಯಾಗಿ ಒಡೆದು, ಪರಸ್ಪರ ದ್ವೇಷಾಸೂಯೆಗಳಿಗೆ ದಾರಿ ಮಾಡಿಕೊಡುತ್ತದೆ ಆದ್ದರಿಂದ ಎಲ್ಲರು ಗುಣ ಪಕ್ಷಪಾತಿಗಳಾಗಿ ಒಳ್ಳೆಯ ನಡೆನುಡಿಗಳನ್ನು ಪುರಸ್ಕರಿಸುತ್ತಾ, ಕೆಟ್ಟ ನಡೆನುಡಿಗಳನ್ನು ತಿರಸ್ಕರಿಸುತ್ತಾ ನಡೆದರೆ ಸಮಾಜಕ್ಕೆ ಒಳಿತು ಉಂಟಾಗುವುದು ಎಂಬ ನೀತಿಯನ್ನು ಸಾರುವ ರಾಮಧ್ಯಾನ ಚರಿತ್ರೆಯನ್ನು ಎಂದೆಂದಿಗೂ ಸಮಾಜಕ್ಕೆ ದಾರಿದೀಪವಾಗುವ ಕಾವ್ಯವೆಂದು ತಿಳಿಸಿದರು.
ಆನಂತರ ಬೆಂಗಳೂರಿನ ಖ್ಯಾತ ಹಾಡುಗಾರ್ತಿ ಶ್ರೀಮತಿ ಪುಸ್ತಕಂ ರಮಾ ಮತ್ತು ಅವರ ಮಗಳು ದೀಪ್ತಿ ಅವರು ಕನಕದಾಸರು ರಚಿಸಿದ ಕೀರ್ತನೆಗಳನ್ನು ಹಾಡಿ ಸಭಿಕರನ್ನು ಭಕ್ತಿ ಸುಧೆಯಲ್ಲಿ ಮುಳುಗಿಸಿದರು. ಡಿಸೆಂಬರ್ 2, 2012 ರ ರವಿವಾರ ಸಂಜೆ 3.00 ಕ್ಕೆ "ದಾಸರು ನಮ್ಮ ಈಶರು" ಕಾರ್ಯಕ್ರಮದ 2ನೇ ದಿನದಂದು "ಪುರಂದರದಾಸರ ನಮನ" ಇತ್ತು ಕರ್ನಾಟಕದ ಖ್ಯಾತ ರಂಗಕರ್ಮಿ ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ಅವರು ಕಾರ್ಯಕ್ರಮದ ಆರಂಭದಲ್ಲಿ "ದಾಸರ ಕೃತಿಗಳಲ್ಲಿ ಕೇವಲ ಭಕ್ತಿಯಷ್ಟೇ ಅಲ್ಲದೆ ಸಮಾಜದ ಓರೆ ಕೋರೆಗಳನ್ನು ತೋರಿ ಸಮಾಜವನ್ನು ಎಚ್ಚರಿಸುವ ಅಧ್ಭುತವಾದ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ" ಎಂದು ಹೇಳಿದರು".
ಶ್ರೀಮತಿ ವೇದವಲ್ಲಿ ರಾಮಕೃಷ್ಣ , ಶ್ರೀಮತಿ ವತ್ಸಲಾ ಗರುಡಾಚಾರ್, ಶ್ರೀಮತಿ ರುಕ್ಮಜಾ ವರದನ್, ಶ್ರೀಮತಿ ಸುಧಾ ರಾಮಪ್ರಕಾಶ್, ಶ್ರೀಮತಿ ಸುರೇಶ ಅವರು ಬೆಂಗಳೂರಿನ "ಸಂಗೀತ ಸಂಭ್ರಮ" ದಿಂದ ಈ ದಾಸ ಆರಾಧನೆಯನ್ನು ಹುಟ್ಟುಹಾಕಿ ಶ್ರೀ ಪುರಂದರದಾಸರ ನವರತ್ನ ಮಾಲಿಕೆಗೆ ರಾಗ - ತಾಳ ಸಂಯೋಜನೆ ಮಾಡಿ ಒಂದು ಧ್ವನಿ ಮುದ್ರಿಕೆಯನ್ನು ಮಾಡಿದ್ದಾರೆ. ಈ ಮುದ್ರಿಕೆಯ ಗುರಿ, ಎಲ್ಲಿಯೂ ಕೂಡಾ ಎಲ್ಲರು ಒಟ್ಟಾಗಿ ಒಂದೆ ದನಿಯಾಗಿಸಿ ಆರಾಧನೆಯಲ್ಲಿ ಭಾಗವಹಿಸಬಹುದು ಎನ್ನುವುದೇ ಆಗಿದೆ.
ಈ ಆರಾಧನೆಯ ಪ್ರಾರಂಭ ಮುಮ್ಬೈಯಲ್ಲಿಯೇ ಆಗಿದ್ದುದು ಗಮನಾರ್ಹ. ಆರಾಧನೆಯಲ್ಲಿ ವಿದುಷಿಯರಾದ ಶ್ರೀಮತಿ ಪುಸ್ತಕಂ ರಮಾ, ಶ್ರೀಮತಿ ದೀಪ್ತಿ ಶ್ರೀನಾಥ್ ಅವರು ಕೂಡಾ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಾದ ಕಲೆಯನ್ನು ನೀಡಿತ್ತು. ಶ್ರೀಮತಿ ರಮಾ ಮತ್ತು ಶ್ರೀಮತಿ ದೀಪ್ತಿ ಶ್ರೀನಾಥ್ ಅವರು ಮೊದಲು ದಾಸರ ಕೃತಿಗಳನ್ನು ಹಾಡಿ ಕೇಳುಗರ ಮನವನ್ನು ಗೆದ್ದರು 'ಕೃಷ್ಣಾ ನೀ ಬೇಗನೆ ಬಾರೋ', 'ಬಾರೋ ಕೃಷ್ಣಯ್ಯ', 'ಸತ್ಯವಂತರಿಗೆ ಇದು ಕಾಲವಲ್ಲ' ಮುಂತಾದ ಕೀರ್ತನೆಗಳನ್ನು ಭಾವಪೂರ್ಣವಾಗಿ ಕೇಳುವ ಸದವಕಾಶ ಸಭಿಕರಿಗೆ ಒದಗಿ ಬಂದದ್ದು ಒಂದು ವಿಶೇಷ.
ನಂತರ ಮುಂಬಯಿಯ ಕಲಾವಿದರಾದ ವಿದ್ವಾನ್ ಶ್ರೀ ಅಶೋಕ್, ವಿದುಷಿ ಶ್ರೀಮತಿ ವೀಣಾ ಶಾಸ್ತ್ರಿ, ವಿದುಷಿ ಶ್ರೀಮತಿ ಶ್ಯಾಮಲಾ ರಾಧೇಶ್, ಶ್ರೀಮತಿ ಜಯಲಕ್ಷ್ಮಿ ಅದ್ಯ ಕುಮಾರಿ ನಮಿತಾ, ಮತಿ ರಾಮಾ ವಸಂತ್, ಶ್ರೀಮತಿ ಸುಧಾ ಶ್ರೀನಿವಾಸ್, ಶ್ರೀ ಬಾಲಸುಮ್ದರ್, ಶ್ರೀ ರೋಹನ್, ಅವರುಗಳು ಶ್ರೀಮತಿ ರಮಾ, ಶ್ರೀಮತಿ ದೀಪ್ತಿ , ಶ್ರೀಮತಿ ವೇದವಲ್ಲಿ ರಾಮಕೃಷ್ಣ, ಶ್ರೀಮತಿ ವತ್ಸಲಾ ಗರುಡಾಚಾರ್, ಶ್ರೀಮತಿ ರುಕ್ಮಜ ವರದನ್, ಶ್ರೀಮತಿ ಸುಧಾ ರಾಮಪ್ರಕಾಶ್, ಶ್ರೀಮತಿ ಸುರೇಶ ರೊಂದಿಗೆ ಶ್ರೀ ಪುರಂದರದಾಸರ ನವರತ್ನ ಮಾಲಿಕೆಯ ಕೃತಿಗಳನ್ನು ಒಂದೆ ದನಿಯಲ್ಲಿ ಹಾಡಿದರು. ಶ್ರೀ ಪುರಂದರದಾಸರ "ಲಂಬೋದರ ಲಕುಮಿಕರ ಜಯ ಜಾನಕಿಕಾಂತ, ಅಡಿದನೋ ರಂಗ, ಕಲ್ಲು ಸಕ್ಕರೆ ಕೊಳ್ಳಿರೋ, ಓಡಿ ಬಾರೋ ರಂಗ, ಸಕಲ ಗ್ರಹ ಬಲಂ ನೀನೆ, ಪೋಗದಿರೆಲೋ ರಂಗ, ನಾನಿನ್ನ ಧ್ಯಾನದೊಳಿರಲು, ಕೃಷ್ಣಮೂರ್ತಿ ಕಣ್ಣ ಮುಂದೆ, ಬಂದನೇನೆ ರಂಗ" ಕೃತಿಗಳನ್ನು ರಾಗ - ತಾಳ - ಭಾವವಾಗಿ ಹಾಡಿ ನಂತರ ದಾಸರ 'ಇಮ್ದಿನದಿನವೇ ಸುದಿನವು' ಹಾಡಿ ನಂತರ ದಾಸರ 'ಇಂದಿನ ನವೇ ಸುದಿನವು" ಹಾಡಿ, ಮಂಗಳವನ್ನು ಹಾಡಿದರು.
ಕಾರ್ಯಕ್ರಮದ ರುವಾರಿಯಾದ ಶ್ರೀ ಶ್ರೀನಿವಾಸ ಕಪ್ಪಣ್ಣನವರು ಕಾರ್ಯಕ್ರಮದ ಮೊದಲಲ್ಲಿ ದಾಸರ ಸಾಮಾಜಿಕ ಮೌಲ್ಯಗಳು ಇಂದಿಗೂ ಸತ್ಯವಾಗಿದ್ದು ವಚನಕಾರರ ಪರನ್ಪರೆಯಮ್ತೆಯೇ ದಾಸರು ನಾಡಿಗೆ ಇತ್ತ ಕೊಡುಗೆಗಳನ್ನು ವಿವರಿಸಿದರು ನಂತರ ಕಾರ್ಯಕ್ರಮದ ಜೊತೆಗೆ ಪ್ರತಿಯೊಂದು ದಾಸಕ್ರುತಿಯ ಪೂರ್ವಾಪರ ಅಂತೆಯೇ ಅದರ ಹಿಮ್ದಿರುವ್ ಅಭಾವನಾ ಮೌಲ್ಯಗಳನ್ನು ವಿವರಿಸಿದರು.
ಒಟ್ಟಾರೆ ಇಂತಹ ಕಾರ್ಯಕ್ರಮ ಇದೇ ಮೊದಲು. ಪ್ರತಿ ವರ್ಷ ತಿರುವಯ್ಯುರಿನಲ್ಲಿ ತ್ಯಾಗರಾಜ ಆರಾಧನೆಯನ್ನು ಕೇಳಿದ್ಡಿವಿ. ಕರ್ನಾಟಕ ಸಂಗೀತದ ಪಿತಾಮಹರಾದ ಶ್ರೀ ಪ್ರುಂದರದಾಸರನ್ನು ಆರಾಧಿಸುವ ಇಂತಹ ಕಾರ್ಯಕ್ರಮಗಳ ಅಗತ್ಯವನ್ನು ಪೂರೈಸಿದ ಮೈಸೂರು ಅಸೋಸಿಯೇಶನ್ ಹಾಗು ಸಂಗೀತ ಸಂಭ್ರಮ ಕಾರ್ಯ ಹೊಗಳತಕ್ಕದ್ದು .