ಮೈಸೂರು ಅಸೋಸಿಯೇಷನ್ ಮುಂಬೈನಲ್ಲಿ ನವೆಂಬರ್ ೧೫ ರಿಂದ ನವೆಂಬರ್ ೩೦ ರ ತನಕ ಮಕ್ಕಳಿಗಾಗಿ "ರಂಗ ತರಭೇತಿ ಶಿಬಿರ " ವನ್ನು ಹಮ್ಮಿಕೊಳ್ಳಲಾಗಿದೆ. ಈ ತರಭೇತಿಗೆ ಅಸೋಸಿಯೇಷನ್ ನ ಸದಸ್ಯರ ಮಕ್ಕಳಲ್ಲದೇ, ಅವರ ಪರಿಚಯದವರ ಮಕ್ಕಳನ್ನು ಸಹ ಈ ತರಭೇತಿಗೆ ಸೇರಿಸಬಹುದು. ಹಲವು ವೈವಿಧ್ಯತೆಯಿಂದ ಕೂಡಿದ ಈ ತರಭೇತಿಯು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಬಲ್ಲದು. ತರಭೇತಿಯಲ್ಲಿ ಪಾಲ್ಕೊಂಡ ಮಕ್ಕಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್ ನ ಕಛೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ. ( ೦೨೨ -೨೪೦೨ ೪೬೪೭ / ೨೪೦೩ ೭೦೬೫ ).
News
ಮಕ್ಕಳಿಗಾಗಿ "ರಂಗ ತರಭೇತಿ ಶಿಬಿರ "
October 22, 2012