ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ - 2013
ಕನ್ನಡವನ್ನು ಹೇಗೆ ಉಳಿಸಬೇಕೆಂದರೆ ಮಕ್ಕಳಿಗೆ ಕನ್ನಡ ಕವಿತೆಗಳು ತಲುಪುವಂತೆ ಮಾಡಬೇಕು ಒತ್ತಾಯವಿಲ್ಲದೆ ಕನ್ನಡ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಪ್ರೀತಿಯನ್ನು ಬೆಳೆಸಬೇಕು. ಕನ್ನಡ ನಾಟಕಗಳಲ್ಲಿ ಮಕ್ಕಳನ್ನು ಅಭಿನಯಿಸುವಂತೆ ಮಾಡಬೇಕು. ಕನ್ನಡದ ದೊಡ್ಡ ಶಕ್ತಿ ಕಾವ್ಯ ಶಕ್ತಿ. ಆದರೆ ನಾವಿಂದು ಗದ್ಯಪ್ರಿಯರಾಗಿದ್ದೇವೆ. ಕರ್ನಾಟಕವೆನ್ನುವ ಶಕ್ತಿ ಮುಂಬಯಿಯಲ್ಲಿ ತನ್ನ ಆತ್ಮವನ್ನಿಟ್ಟಿದೆ ಎನ್ನಬಹುದು. ಯಾಕೆಂದರೆ ಕನ್ನಡ ತಾಯಿ ಭುವನೇಶ್ವರಿಯ ರಥವನ್ನು ಎಳೆಯಬೇಕಾದರೆ ನಾವು ಎಲ್ಲಿ ಇದ್ದರೂ ಮಾಡಬಹುದು ಭೌಗೋಳಿಕ ಮಿತಿಯನ್ನು ದಾಟಿದ ಸಾಂಸ್ಕೃತಿಕ ಆವರಣ ಮುಂಬಯಿ ಕನ್ನಡಿಗರದ್ದು. ಕನ್ನಡದ ಸಂಸ್ಕೃತಿಯ ನಂದಾದೀಪವನ್ನು ನಿರಂತರವಾಗಿ ಬೆಳಗಿಸಿದವರು, 'ನಗರ' ವನ್ನು ಕನ್ನಡ ಸಾಹಿತ್ಯಕ್ಕೆ ತಂದವರು ಮುಂಬಯಿ ಲೇಖಕರು ಎಂದು ಬೆಂಗಳೂರಿನ ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಅವರು ನುಡಿದರು. ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ನಡೆದ ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಆಧುನಿಕ ಕನ್ನಡ ಕಾವ್ಯ' ಎಂಬ ಏಷಯದ ಬಗ್ಗೆ ಮಾತನಾಡುತ್ತಾ, ಇಂಗ್ಲೀಷ್ ಸಾಹಿತ್ಯದ ಪ್ರಭಾವದಿಂದಾಗಿ ನಮ್ಮ ಕನ್ನಡ ಕವಿಗಳನ್ನು ಮೆರೆತಿದ್ದೇವೆ ವ್ಯಾಸರಾಯ ಬಲ್ಲಾಳ, ಅರವಿಂದ ನಾಡಕರ್ಣಿ, ಯಶವಂತ ಚಿತ್ತಾಲ ಮೊದಲಾದವರು ಮುಂಬಯಿ ನಗರದ ಸ್ಪಂದನವನ್ನು ತಮ್ಮ ಬರಹಗಳಲ್ಲಿ ಮೂಡಿಸಿದ್ದಾರೆ ದೇಶದ ಐಕ್ಯಮತ್ಯವನ್ನು ಸಾಧಿಸುವ ಒಂದು ಪರೋಕ್ಷ ಪರಿ ಇದಾಗಿದೆ. ಭೌಗೋಳಿಕ ವಾಗಿ ದಾಟಿ ಸಾಂಸ್ಕೃತಿಕವಾಗಿ ಕನ್ನಡತ್ವ ಬೆಳೆಯಬೇಕು. 12 ನೇ ಶತಮಾನ ಮತ್ತು 20 ನೇ ಶತಮಾನ ಕನ್ನಡ ಕಾವ್ಯದ ಸಂದರ್ಭದಲ್ಲಿ ಮಹತ್ವವಾದುದು. ಇಡೀ ಜಗತ್ತಿಗೆ ವಿಶಿಷ್ಟವಾದ ಕನ್ನಡದ ಕಾಣಿಕೆ ಅಂದರೆ ಅದು ವಚನ ಸಾಹಿತ್ಯ. ಸಮೃದ್ಧವೂ ಗುಣಾತ್ಮಕವೂ ಕನ್ನಡಕ್ಕೆ ಹೊಸನೆಲೆಯನ್ನು ಕಲ್ಪಿಸಿದ ಸಾಹಿತ್ಯ ಅದು ವಚನ ಸಾಹಿತ್ಯ. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಎಲ್ಲ ಸಾಹಿತ್ಯವು ಧರ್ಮಬದ್ಧವಗಿಯೇ ಮೂಡಿಬಂದಿದೆ ಕುವೆಂಪು, ಬೇಂದ್ರೆ ಮಾಸ್ತಿ, ಪುತಿನ, ಕೆ. ಎಸ್. ನರಸಿಂಹಾಚಾರ್, ಅಡಿಗರ ಕಾವ್ಯದ ಸ್ವಾರಸ್ಯವನ್ನು ನಮ್ಮ ಮುಂದೆ ಮನೋಜ್~ಜವಾಗಿ ತೆರೆದಿಟ್ಟರು. ಮೈಸೂರು ಅಸೋಸಿಯೇಷನ್ನಿನ ವಿಶ್ವಸ್ಥರಾದ ಕೆ.ಮಂಜುನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು ಆರಂಭದಲ್ಲಿ ಎನ್.ಕೆ.ಇ.ಎಸ್. ಶಾಲಾ ಮಕ್ಕಳಿಂದ ಕಾವ್ಯನೃತ್ಯ ನಡೆಯಿತು. ಮೈಸೂರು ಅಸೋಸಿಯೇಷನನ್ನಿನ ಕೋಶಾಧಿಕಾರಿ ಮಂಜು ದೇವಾಡಿಗ ಅವರು ಮಂದನಾರ್ಪನೆಗೈದರು.
ಮರುದಿನ ನಡೆದ ಕಾರ್ಯಕ್ರಮದಲ್ಲಿ "ನಾನು ಮತ್ತು ನನ್ನ ಸಮ್ಕಾಲೀನರು" ಎಂಬ ವಿಷಯದ ಕುರಿತು ಮಾತನಾಡಿದ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆಲವರು ಒತ್ತಾಯದಿಂದ ಕವಿತೆಯನ್ನು ಕಟ್ಟುತ್ತಾರೆ. ಬೇಂದ್ರೆ ಹುಟ್ಟು ಕವಿ. ಕಟ್ಟುವ ಕವಿಗೂ ಹುಟ್ಟುವ ಕವಿಗೂ ವ್ಯತ್ಯಾಸವಿದೆ. ಕನ್ನಡ ಕಾವ್ಯದ ಎರಡು ಕಣ್ಣುಗಳು ಬೇಂದ್ರೆ ಮತ್ತು ಅಡಿಗರು. ಕವಿತೆ ಬರೆಯುವುದು ಮುಖ್ಯವಲ್ಲ ಕವಿತೆ ಏನು ಹೇಳುತ್ತದೆ ಎಂಬುದು ಮುಖ್ಯವಾಗುತ್ತದೆ. ಕಾವ್ಯದಲ್ಲಿ ಘನತೆಯನ್ನು ಮೂಡಿಸಬೇಕಾದರೆ ಗಾಢವಾದ ಅಧ್ಯಯನ, ಸಂಯಮ, ನಿಷ್ಠೆ ಇರಬೇಕು ಸತತವಾದ ಬರವಣಿಗೆ ತುಂಬಾ ಅಗತ್ಯ. ಆಗ ನಿಮ್ಮನ್ನು ನೀವು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಹಳೆಯ ಸ್ವರಗಳನ್ನು ಬಳಸಿ ಹೊಸ ಸಂಗೀತವನ್ನು ಸೃಷ್ಟಿಸಬೇಕು. ಆ ಕೆಲಸ ಆಗಬೇಕಾಗಿದೆ ನಮ್ಮ ಕಾವ್ಯದ ಸಂದರ್ಭದಲ್ಲಿ ಯಾವ ರೀತಿ ಕವಿತೆ ರಚನೆ ಆಗುತ್ತಿತ್ತು ಎನ್ನುವದರ ಕುರಿತು ವಿವೇಚಿಸಿದರು.
ಇದೇ ಸಂದರ್ಭದಲ್ಲಿ ನಾಡೋಜ ಚೆನ್ನವೀರ ಕಣವಿ ಅವರ : "ಬೇಂದ್ರೆ ಕಾವ್ಯದ ಕುಹೂಕುಹೂ" ಹಾಗೂ ಡಾ. ಎಚ್ .ಎಸ್.ವೆಂಕಟೇಶ ಮೂರ್ತಿ ಅವರಿಂದ ಲೋಕಾರ್ಪಣೆಗೊಂಡಿತು. ಕೃತಿಕಾರರಾದ ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಕೃತಿರಚನೆಯ ಹಿನ್ನೆಲೆಯ ಕುರಿತು ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮುಖ್ಯಸ್ಥರಾದ ಡಾ.ಜಿ.ಎನ್ ಉಪಾಧ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು ನಾಡಿನ ಹಿರಿಯ ಸಾಹಿತಿಗಳು ಈ ದತ್ತಿ ಉಪನ್ಯಾಸದ ಮಾಲಿಕೆಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿರುವುದು ಹೆಮ್ಮೆಯ ವಿಷಯ. ಆ ಪ್ರಯುಕ್ತ ಇಂದು ನಾಡಿನ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿಯವರು ನಮ್ಮೊಂದಿಗಿದ್ದು, ಉಪನ್ಯಾಸವನ್ನು ನೀಡಿರುವುದು ನಾವೆಲ್ಲರೂ ಖುಷಿ ಪಡಬೇಕಾದ ಸಂಗತಿ ಎಂದು ಹೇಳಿದರು
ಡಾ. ಮಂಜುನಾಥರು ಪ್ರಾರ್ಥನೆಯನ್ನು ಗೈದರು. ಶ್ರೀಮತಿ ಜ್ಯೋತಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. ಕೆ. ಮಂಜುನಾಥಯ್ಯ ವಂದಿಸಿದರು.