ನಾಟಕೋತ್ಸವ: ೨೦.೧೨.೨೦೧೩ ರಿಂದ ೨೨.೧೨.೨೦೧೩ ರವರೆಗೆ
೨೦.೧೨.೨೦೧೩ ರಿಂದ ೨೨.೧೨.೨೦೧೩ ರವರೆಗೆ ಮೈಸೂರು ಅಸೋಸಿಯೇಷನ್ ಮುಂಬೈ ಏರ್ಪಡಿಸಿರುವ ಮೂರು ದಿನಗಳ ಕನ್ನಡ ನಾಟಕೋತ್ಸವವು ಯಶಸ್ವಿಯಾಗಿ ನೆರವೇರಿತು. ಮೊದಲನೆಯ ದಿನ (೨೦.೧೨.೨೦೧೩) ಶಿವಮೊಗ್ಗದ ಹೊಂಗಿರಣ ತಂಡ ಅಭಿನಯಿಸಿದ "ಕರ್ಣಾಂತರಂಗ" ಎಂಬ ನಾಟಕವು ಡಾ. ಸತೀಶ್ ಸಾಸ್ವೆಹಳ್ಳಿಯವರವ ನಿರ್ದೇಶನದಲ್ಲಿ ಮೂಡಿಬಂತು. ಈ ನಾಟಕವು ಮಹಾಭಾರತದ ಪಾತ್ರ ಕರ್ಣನ ಅಂತರಂಗದ ದ್ವಂದ್ವವನ್ನು ಅತ್ಯಂತ ಯಶಸ್ವಿಯಾಗಿ ರಂಗದ ಮೇಲೆ ಸಾದರ ಪಡಿಸಿತು. ಕರ್ಣನ ಪಾತ್ರವನ್ನು ಇಬ್ಬರು ನಟರ ಮೂಲಕ ಅವನ ಜೀವನದ ಅನೇಕ ಮಹತ್ವದ ವೃತ್ತಾಂತಗಳನ್ನು ರಂಗದ ಮೇಲೆ ತೆರೆದಿಟ್ಟಿದು ಒಂದು ವಿಶೇಷ ಪ್ರಯೋಗ. ಇದರ ತಾಂತ್ರಿಕತೆ ಬಹಳ ಸೊಗಸಾಗಿತ್ತು. ಎ.ಏನ್.ಸುರೇಂದ್ರ ಹಾಗೂ ಎಸ. ಚಂದ್ರಶೇಖರ್ ರವರು ಕರ್ಣನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಲ್ಲಾ ಕಲಾವಿದರು ಉತ್ತಮ ಅಭಿನಯ ನೀಡಿ ಪ್ರೇಕ್ಷಕರನ್ನು ರಂಜಿಸಿದರು.
ಎರಡನೆಯ ದಿನ (೨೧.೧೨.೨೦೧೩) ಬೆಂಗಳೊರಿನ ಅಂತರಂಗ ತಂಡದವರು "ಶಾಲಭಂಜಿಕೆ" ನಾಟಕವನ್ನು ಯಶಸ್ವಿಯಾಗಿ ಅಭಿನಯಿಸಿದರು. ಐತಿಹಾಸಿಕ ಹಿನ್ನೆಲೆಯ ಈ ನಾಟಕದ ಕಥಾವಸ್ತ್ರು "ಶಾಲಭಂಜಿಕೆ"ಯ ನಗುವಿನ ಹಿನ್ನೆಲೆಯಿಂದ ಕೂಡಿತ್ತು. ಈ ನಗು ಇಂದಿಗೂ ಜಗತ್ಪ್ರಸಿದ್ದ "ಮೊನಾಲಿಸ". ನಗುವಿಗಿಂತಲೂ ಉತೃಷ್ಠವಾದುದು ಎಂದು ಪ್ರಾಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತಮ ನಿರ್ದೇಶನ ಅಚ್ಚುಕಟ್ಟಾದ ಕಲಾವಿನ್ಯಾಸ, ಹಿತವಾದ ಸಂಗೀತ, ಅತ್ಯುತ್ತಮ ಬೆಳಕು ಹಾಗೂ ಎಲ್ಲ ನಟರ ಉತ್ತಮ ಅಭಿನಯದಿಂದಾಗಿ ನೆರೆದಿದ್ದ ಪ್ರೇಕ್ಷಕರಿಗೆ ಮುದನೀಡಿತು. ಮೂಲಕಥೆ ಡಾ| ಎನ್. ಗಣೇಶಯ್ಯ ನಾಟಕ ರಚನೆ ಎಸ. ಆರ್. ಗಿರೀಶ್ ರವರದಾಗಿತ್ತು.
ಮೂರನೆಯ ದಿನ (೨೨.೧೨.೨೦೧೩) ನಾಟಕ ಕನ್ನಡ ಹಾಸ್ಯ ಬರಹಗಾರರಲ್ಲಿ ಸಾಕಷ್ಟು ಹೆಸರು ಮಾಡಿದ್ದ "ಬೀಚಿ" ಯವರ " ಉತ್ತರಭೂಪ" ಪ್ರಶ್ನೋತ್ತರದಿಂದ ಆಯ್ಕೆ ಮಾಡಿದ್ದುದು. ಅಂತರಂಗದವ್ಚರು ಅಭಿನಯಿಸಿದ "ಉತ್ತರ ಭೂಪ" "ಬೀಚಿ" ನಾಟಕ ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ನಾಟಕದ ರೂಪ ಹಾಗೂ ಗೀತ, ಸಾಹಿತ್ಯ ರಚನೆ ಎನ್. ಎಸ. ಮಹೇಶ್ ರವರದಾಗಿತ್ತು. ಪ್ರತಿ ಹಂತದಲ್ಲೂ ನಾಟಕ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತು. ನಾಟಕದಲ್ಲಿ ಪಾತ್ರವಹಿಸಿದ್ದ ಎಲ್ಲಾ ನಟ ನಟಿಯರ ಅಭಿನಯ ನಿಜಕ್ಕೂ ಪ್ರಶಂಸನಿಯ. ಅತ್ಯುತ್ತಮ ನಿರ್ದೇಶನ , ಹಿತಮಿತ ಸಂಗೀತ, ಆಕರ್ಷಕ ವಿನ್ಯಾಸ, ಮತ್ತು ಉತ್ತಮ ಬೆಳಕಿನಿಂದಾಗಿ ಇಡೀ ನಾಟಕ ಅತ್ಯಂತ ಯಶಸ್ವಿಯಾಯಿತು. ಈ ಎರಡೂ ನಾಟಕಕ್ಕೆ ನಿರ್ದೇಶನ "ಅರ್ಚನಾ ಶ್ಯಾಮ್" ರವರದಾಗಿತ್ತು ಹಾಗೂ ನಿರ್ವಹಣೆ ಅಂತರಂಗ ಅಂಕಲ್ ಶ್ಯಾಮ್ ವಹಿಸಿದ್ದರು.